ರಾಜ್ಯ ನಾಯರಿ ಯುವ ಬಳಗ
7/19/20251 min read


ರಾಜ್ಯ ನಾಯರಿ ಯುವ ಬಳಗದ ವತಿಯಿಂದ ನಡೆದ ಈ ದಿನ ಸಂದೀಪನ ಶಾಲೆ ಆಂಗ್ಲ ಮಾಧ್ಯಮ ನಾಗೂರು ನಮ್ಮ ಸಮಾಜದ ವಿದ್ಯಾರ್ಥಿಗಳಿಗೆ ನೀಡಿದ ಬ್ಯಾಗ್, ಪುಸ್ತಕ, ಪರಿಕರಗಳು, ಹಾಗೂ ಸ್ಟೀಲಿನ ನೀರಿನ ಬಾಟಲಿಗಳ ವಿತರಣಾ ಕಾರ್ಯಕ್ರಮ ವಿಜ್ರಂಬಣೆಯಿಂದ ನಡೆಯಿತು.
ನಾಯರಿ ಸಮಾಜದ ಯುವ ಪೀಳಿಗೆಗಳಾದ ಶ್ರೀನಿಧಿ, ಸನ್ನಿಧಿ, ಹಾಗೂ ಭೂಮಿಕಾ, ಮೂರು ಜನ ಮಕ್ಕಳ ಪ್ರಾರ್ಥನೆಯೊಂದಿಗೆ ಆರಂಭಿಸಿ
ಸಮಾಜದ ಹಿರಿಯರು, ನಾಯರಿ ಸಮಾಜದ ಮುಖಂಡರು ಆದ ಶ್ರೀ ರಮೇಶ್ ನಾಯರಿ ಅಧ್ಯಕ್ಷತೆ ವಹಿಸುವ ಜೊತೆಗೆ ಅಧ್ಯಕ್ಷತೆಯ ಮಾತನಾಡಿದರು.
ಹಾಗೆಯೇ ಮುಖ್ಯ ಅತಿಥಿಗಳಾಗಿ ಆಸೀನರಾದ ಕರ್ನಾಟಕ ರಾಜ್ಯ ನಾಯರಿ ಸಮಾಜ ಸುಧಾರಕ ಸಂಘ ( ರಿ.)ಬ್ರಹ್ಮಾವರ, ಅಧ್ಯಕ್ಷರಾದ ಪ್ರಭಾಕರ್ ನಾಯರಿ, ಹಾಗೂ ಕರ್ನಾಟಕ ರಾಜ್ಯ ನಾಯರಿ ಸಮಾಜ ಸುಧಾರಕ ಸಂಘ (ರಿ.) ಬೆಂಗಳೂರು ಘಟಕ ಮಾಜಿ ಸಂಚಾಲಕರು ಆದ ಜಿ. ವೆಂಕಟೇಶ್ ನಾಯರಿ, ಮುಖ್ಯ ಅತಿಥಿಗಳಾಗಿ.
ವೇದಿಕೆ ಅಲಂಕರಿಸಿದ ನಮ್ಮ ಸಮಾಜದ ದಾನಿಗಳಾದ
ಶ್ರೀಯುತ ಮಂಜುನಾಥ್ ನಾಯರಿ ಅಂಗಡಿಯರಮನೆ,
ಶ್ರೀಯುತ ಸಂಜೀವ ನಾಯರಿ ತೋಟದ ಮನೆ,
ಶ್ರೀಯುತ ವಿನಯ್ ಕುಮಾರ್ ನಾಯರಿ ಅಂಗಡಿಯರಮನೆ,
ಶ್ರೀಯುತ ಕೆ.ಎಲ್. ರವಿ ನಾಯರಿ ಪಡುಮನೆ, ಮಕ್ಕಳಿಗೆ ಶುಭ ಕೋರಿದರು,
ಹಾಗೂ ಪ್ರಾಸ್ತವಿಕ ಮಾತನ್ನು ಶ್ರೀಯುತ ನಿತ್ಯಾನಂದ ನಾಯರಿ ಪಡುಮನೆ, ನೆರವೇರಿಸಿ.
ನಿರೂಪಣೆ ಶ್ರೀಯುತ ರಾಜೇಶ್ ನಾಯರಿ ಹೊಸತೊಟದ ಮನೆ, ಸ್ವಾಗತವನ್ನು ಶ್ರೀಮತಿ ಕಲ್ಯಾಣಿ ನಾಯರಿ ನೆಲ್ಲಿಬೆಟ್ಟು ಮತ್ತು ಕೊನೆಯದಾಗಿ ಧನ್ಯವಾದ ಮಧುಕರ ನಾಯರಿ ಅಂಗಡಿಯರಮನೆ ಮಾಡುವುದರೊಂದಿಗೆ ಮುಕ್ತಾಯಗೊಳಿಸಿದರು ಮಕ್ಕಳ ಮತ್ತು ತಂದೆ ತಾಯಿ ಪಾಲಕರ ಬಗ್ಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಖ್ಯಾತ ವಾಗ್ಮಿಗಳು ಪ್ರಸ್ತುತ ಸರಕಾರಿ ಪದವಿಪೂರ್ವ ಕಾಲೇಜು ಕಂಬದ ಕೋಣೆ ಪ್ರಾಧ್ಯಾಪಕರು ಆದ ವಿಶ್ವನಾಥ್ ಶೆಟ್ಟಿ ಯವರು ಮಕ್ಕಳಿಗೆ ಮತ್ತು ಪೋಷಕರಿಗೆ ಮಕ್ಕಳ ಮತ್ತು ಪೋಷಕರ ಪಾತ್ರ ಮನದಟ್ಟು ಮಾಡಿದರು.
ಗ್ರಾಮ ಪಂಚಾಯತ್ ಪ್ರಥಮ ಪ್ರಜೆ ಶೇಖರ್ ಕಾರ್ವಿ ನಮ್ಮ ಸಮಾಜ ಮತ್ತು ಮಕ್ಕಳಿಗೆ ಭವಿಷ್ಯದ ಬಗ್ಗೆ ಹಾಗೂ ಸಂಸ್ಕಾರದ ಬಗ್ಗೆ ಮಾತನಾಡಿದರು. ಬಂದ ಸಮಾಜದ ಬಾಂಧವರೆಲ್ಲ ಕಾರ್ಯಕ್ರಮದ ಕೊನೆಯವರೆಗೂ ಇದ್ದು ಕಾರ್ಯಕ್ರಮ ಯಶಸ್ವಿಗೊಳಿಸಿ ಭೋಜನ ಮಾಡಿ ಕಾರ್ಯಕ್ರಮ ಯಶಸ್ವಿಗೊಳಿಸಿದರು
Support
Empowering students through education and donations.
Future
© 2025. All rights reserved.