ರಾಜ್ಯ ನಾಯರಿ ಯುವ ಬಳಗ

7/19/20251 min read

ಆತ್ಮೀಯ ಸಮಾಜ ಬಾಂಧವರೇ..., ಹಾಗೂ ರಾಜ್ಯ ನಾಯರಿ ಯುವ ಬಳಗದ ಸರ್ವ ಸದಸ್ಯರೇ.. ಪದಾಧಿಕಾರಿಗಳೇ.., ಈ ದಿನದ ನಮ್ಮ ಕಾರ್ಯಕ್ರಮ ತಮ್ಮೆಲ್ಲರ ಸಂಪೂರ್ಣ ಸಹಕಾರದಿಂದ ಹಾಗೂ ಸಮಾಜ ಬಾಂಧವರ ಒಗ್ಗೂಡಿಕೆಯ ಒಗ್ಗಟ್ಟು ಸ್ಮರಿಸಲೇಬೇಕಾದ ವಿಚಾರವಾಗಿದೆ. ಈ ದಿನ ಕಾರ್ಯಕ್ರಮದ ಯಶಸ್ವಿಗೆ ನಿಮ್ಮೆಲ್ಲರ ಉಪಸ್ಥಿತಿ ಹಾಗೂ ದಾನಿಗಳ ಕೊಡುಗೆ, ತನು-ಮನ- ಧನದೊಂದಿಗೆ ಯುವ ಬಳಗದ ಯುವಕರ ಸಂಪೂರ್ಣ ಸಹಕಾರ ಜೊತೆಗೆ ದಾನಗಳಲ್ಲಿ ಶ್ರೇಷ್ಠವಾದ ದಾನ ಅನ್ನದಾನ ಎಂಬಂತೆ, ಸಮಾನ ಮನಸ್ಥಿತಿಯ ಸಮಾಜದ ಯುವಕರ ಕೂಡುವಿಕೆಯಿಂದ ಈ ದಿನ ನೀಡಿದ ಅನ್ನದಾನ ಶ್ರೇಷ್ಠವಾದ ದಾನ ಎಂದು ಹೇಳುತ್ತಾ, ಈ ದಿನದ ಕಾರ್ಯಕ್ರಮವನ್ನು ಯಶಸ್ಸಿನೊಂದಿಗೆ ಬಲಿಷ್ಠಗೊಳಿಸಿದೆ. ಈ ಒಗ್ಗಟ್ಟು, ಈ ಕೂಡುವಿಕೆ, ಮುಂದೆಯೂ ಹೀಗೆ ಇರಲಿ. ನಮ್ಮ ರಾಜ್ಯ ನಾಯರಿ ಯುವ ಬಳಗ ಮುಂದಿನ ಜನಾಂಗಕ್ಕೆ ಮಾದರಿಯಾಗಲಿ. ನಿಮ್ಮೆಲ್ಲರ ಸೇವಾ ಸಹಕಾರ ನಿರಂತರವಾಗಿರಲಿ. ನಂಬಿದಂತ ಕುಲದೇವತೆ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ಸರ್ವರಿಗೂ ಅಭಯ ಹಸ್ತ ನೀಡಿ ಒಳಿತನ್ನು ಮಾಡಲಿ. ಮುಂದೆಯೂ ಕೂಡ ತಮ್ಮೆಲ್ಲರ ಸೇವಾ ಮನೋಭಾವ, ಕಾರ್ಯಕ್ರಮದ ಯಶಸ್ಸಿಗೆ ನಿಮ್ಮೆಲ್ಲರ ಬೆಂಬಲ ಶಾಶ್ವತವಾಗಿ ಹೀಗೆ ನಿರಂತರವಾಗಿರಲಿ, ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಸಮಾಜ ಬಾಂಧವರೇ ಕಾರ್ಯಕ್ರಮದ ರೂವಾರಿಗಳಾದ ಮುದ್ದು ಪುಟಾಣಿ ಮಕ್ಕಳೇ, ಹಾಗೂ ತಂದೆ. ತಾಯಿ. ಪಾಲಕರೇ ಕಾರ್ಯಕ್ರಮದ ವೇದಿಕೆ ಅಲಂಕರಿಸಿದ ಸಭಾ ಅಧ್ಯಕ್ಷರೇ ಅತಿಥಿ ಮಹಾನುಭಾವರೇ ಹಾಗೂ ಕೊಡುಗೈ ದಾನಿಗಳೇ, ಒಂದೇ ಮಾತಿನಲ್ಲಿ ತಮಗೆಲ್ಲರಿಗೂ ಅನಂತ ಅನಂತ ಧನ್ಯವಾದಗಳು. ರಾಜ್ಯ ನಾಯರಿ ಯುವ ಬಳಗ ಇನ್ನಷ್ಟು ಉತ್ತುಂಗಕ್ಕೆ ಏರಲಿ ಎಂದು ಬಯಸುತ್ತಾ... ನಿಮ್ಮೆಲ್ಲರಿಗೂ ಮನಸಾರೆ ನಮಿಸುತ್ತೇನೆ. ಎಲ್ಲರಿಗೂ ಒಳಿತಾಗಲಿ, ಎಲ್ಲರಿಗೂ ಶುಭವಾಗಲಿ,

ನಮ್ಮ ರಾಜ್ಯ ನಾಯರಿ ಯುವ ಬಳಗದ ಲೋಗೋ ಕೆಳಗೆ ಹಾಕಿರುವ ಅದ್ಭುತ ಸಾಲುಗಳಾದ ನಾಯರಿ ಸಮಾಜದ ಸಹಾಯ, ಸಹಕಾರವೇ...

ನಾಯರಿ ಯುವ ಬಳಗದ ಅಭ್ಯುದಯ. ಎಂಬ ಸಂದೇಶ ನಮ್ಮ ಇಡೀ ನಾಯರಿ ಜನಾಂಗಕ್ಕೆ ಪಸರಿಸಲಿ..🙏